ಕೈ ಅಭ್ಯರ್ಥಿ ಗೆಲುವಿಗಾಗಿ ಉರುಳು ಸೇವೆ ಮಾಡಿದ ಶಿವಳ್ಳಿ ಅಭಿಮಾನಿ - pray
🎬 Watch Now: Feature Video
ಕುಂದಗೋಳ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಆಯಾ ಪಕ್ಷದ ಅಭ್ಯರ್ಥಿಗಳು ಪರೋಕ್ಷವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನು ಕಣದಲ್ಲಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಶಿವಳ್ಳಿ ಗೆಲುವಿಗಾಗಿ ಹಾರೈಸಿ ದಿ. ಸಿ.ಎಸ್.ಶಿವಳ್ಳಿ ಅವರ ಅಭಿಮಾನಿಯೊಬ್ಬ ಇಂದು ಉರುಳು ಸೇವೆ ಮಾಡುವ ಮೂಲಕ ಗಮನ ಸೆಳೆದ. ಸಂಶಿ ಗ್ರಾಮದ ಹನುಮಂತಪ್ಪ ಲಕ್ಷ್ಮೇಶ್ವರ ಎಂಬುವರು ಸಂಶಿಯಿಂದ ಕುಂದಗೋಳದವರೆಗೆ ಸುಮಾರು 10 ಕಿ.ಮೀ. ಉರುಳು ಸೇವೆ ಮಾಡಿ ಕೈ ಅಭ್ಯರ್ಥಿ ಗೆಲುವು ಸಾಧಿಸಲಿ ಎಂದು ಹಾರೈಸಿದರು.