ಇಂದಿರಾ ಜ್ಯೋತಿ ಹೆಸರಿನಲ್ಲಿ ಮಕ್ಕಳಿಗೆ ಸೋಲಾರ್ ದೀಪ ವಿತರಿಸಿದ ಮಹಿಳಾ ಕಾಂಗ್ರೆಸ್ - Indira Jyoti 2020
🎬 Watch Now: Feature Video
ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 103ನೇ ಜಯಂತಿಯನ್ನು ರಾಜ್ಯ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿದರು. ಬೆಂಗಳೂರಿನಲ್ಲಿ ಇಂದು "ಇಂದಿರಾ ಜ್ಯೋತಿ" ಹೆಸರಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿಯನ್ನು ನೆನೆಯುವ ಜತೆಗೆ ಮಕ್ಕಳಿಗೆ ಅನುಕೂಲವಾಗುವ ಮಹತ್ವದ ಸವಲತ್ತು ಪೂರೈಸುವ ಕಾರ್ಯ ಆಯಿತು. ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಪುಷ್ಪ ಅಮರನಾಥ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿರಾ ಜ್ಯೋತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.