ಹರಿಹರ: ಅನೈತಿಕ ಸಂಬಂಧದ ಹಿನ್ನೆಲೆ, ವಿವಾಹಿತ ಮಹಿಳೆ ಕೊಲೆ - ದೇವಸ್ಥಾನದ ನರ್ತಕಿ ಬಾರ್ ಬಳಿ ಈ ಘಟನೆ
🎬 Watch Now: Feature Video
ಜಿಲ್ಲೆಯ ಹರಿಹರ ನಗರದಲ್ಲಿ ವಿವಾಹಿತ ಮಹಿಳೆಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಅನೈತಿಕ ಸಂಬಂಧ ಹಿನ್ನೆಲೆ, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಹರಿಹರ ಪಟ್ಟಣದ ಕುರಬರ ಕೇರಿ ಮದ್ದಮ್ಮ ದೇವಸ್ಥಾನದ ನರ್ತಕಿ ಬಾರ್ ಬಳಿ ಈ ಘಟನೆ ನಡೆದಿದೆ. ಹರಿಹರ ನಗರದ ನಿವಾಸಿ ರೇಖಾ (25) ಕೊಲೆಯಾದ ವಿವಾಹಿತ ಮಹಿಳೆ. ನಾಗರಾಜ್ ಹಾಗೂ ರೇಖಾ ದಂಪತಿಯಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಅನೈತಿಕ ಸಂಬಂಧದ ಹಿನ್ನೆಲೆ ಕೊಲೆ ಮಾಡಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.