ಕಬ್ಬಿಣದ ಗೇಟಿಗೆ ಸಿಲುಕಿ ನರಳಾಡುತ್ತಿದ್ದ ಕಾಡು ಕುರಿ ರಕ್ಷಣೆ - ಗ್ರಾಮ ಪಂಚಾಯಿತಿ ಚುನಾವಣಾ ಪ್ರಚಾರ
🎬 Watch Now: Feature Video
ಗ್ರಾಮ ಪಂಚಾಯಿತಿ ಚುನಾವಣಾ ಪ್ರಚಾರಕ್ಕೆ ಹೋದವರು ಕಬ್ಬಿಣದ ಗೇಟಿಗೆ ಸಿಕ್ಕಿ ನರಳಾಡುತ್ತಿದ್ದ ಕಾಡು ಕುರಿಯನ್ನ ರಕ್ಷಿಸಿದ್ದಾರೆ. ಈ ಘಟನೆ ಜಿಲ್ಲೆಯ ಕಳಸ ತಾಲೂಕಿನ ನೆಲ್ಲಿಕೆರೆ ಗ್ರಾಮದಲ್ಲಿ ನಡೆದಿದೆ. ಚುನಾವಣೆಗೆ ಸ್ಪರ್ಧಿಸಿದ್ದ ನೆಲ್ಲಿಕೆರೆ ಗ್ರಾಮದ ಕಿರಣ್ ಮೋನಿಸ್ ಹಾಗೂ ರತ್ನಾಕರ್ ಎಂಬುವರು ಪ್ರಚಾರಕ್ಕೆಂದು ತೆರಳುವಾಗ ಕಾಡು ಕುರಿ ಕೂಗುತ್ತಿರುವ ಶಬ್ದ ಕೇಳಿಸಿದೆ. ಕೂಡಲೇ ಇಬ್ಬರು ಅಭ್ಯರ್ಥಿಗಳು ಪ್ರಚಾರಕ್ಕೆ ಬಿಡುವು ಕೊಟ್ಟು, ಕಾಡುಕುರಿಯನ್ನ ಹುಡುಕಿಕೊಂಡು ಹೋಗಿ ಅದನ್ನು ಗೇಟಿನಿಂದ ಬಿಡಿಸಿದರು.