ವೀಕೆಂಡ್ ಕರ್ಫ್ಯೂ: ಮಂಗಳೂರು ಸಂಪೂರ್ಣ ಸ್ತಬ್ಧ - weekend curfew imposed
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-11531694-thumbnail-3x2-net.jpg)
ವೀಕೆಂಡ್ ಕರ್ಫ್ಯೂ ಹಿನ್ನೆಲೆ ಇಂದು ಕೂಡ ಮಂಗಳೂರು ಸಂಪೂರ್ಣ ಸ್ತಬ್ಧವಾಗಿದೆ. ಬೆಳಗ್ಗೆ 6ರಿಂದ ಬೆಳಗ್ಗೆ 10ರವರೆಗೆ ಅಗತ್ಯ ವಸ್ತುಗಳ ಖರೀದಿಗಾಗಿ ಸಡಿಲಿಕೆ ಮಾಡಲಾಗಿತ್ತು. ಈ ಸಂದರ್ಭ ಜನರ ಓಡಾಟ, ವಾಹನಗಳ ಓಡಾಟ ಕಂಡು ಬಂದರೂ 10 ಗಂಟೆಯ ಬಳಿಕ ಸಂಪೂರ್ಣ ಬಂದ್ ಆಗಿದೆ. ನಗರದೊಳಗೆ ಪ್ರವೇಶ ಮಾಡುವ ಎಲ್ಲಾ ಕಡೆಗಳಲ್ಲೂ ಪೊಲೀಸರು ಬ್ಯಾರಿಕೇಡ್ ಹಾಕಿದ್ದು, ಅನಗತ್ಯವಾಗಿ ತಿರುಗಾಡುವವರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಆರೋಗ್ಯ ಇನ್ನಿತರ ಅಗತ್ಯ ಸೇವೆಗೆ ಪಾಸ್ ತೋರಿಸಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ.