ಲಾಕ್ಡೌನ್ ಮಧ್ಯೆ ಕಲ್ಲಂಗಡಿ ಮಾರಲು ರೈತನ ಹೊಸ ಐಡಿಯಾ!! - ಜಮೀನಿಂದಲೇ ಕಲ್ಲಂಗಡಿ ಮಾರಾಟ
🎬 Watch Now: Feature Video
ಕೊರೊನಾ ಮಹಾಮಾರಿಯಿಂದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲದೇ ಕೃಷಿಕರು ಕಂಗೆಟ್ಟಿದ್ದಾರೆ. ಆದರೆ, ಇಲ್ಲೊಬ್ಬ ರೈತ ಕೃಷಿ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ಉಡುಪಿ ಜಿಲ್ಲೆಯ ಹಿರಿಯಡ್ಕದ ಸುರೇಶ್ ನಾಯ್ಕ್ 12 ಎಕರೆ ಜಾಗದಲ್ಲಿ ಕಲ್ಲಂಗಡಿ ಹಣ್ಣು ಬೆಳೆದಿದ್ದು ಇದೀಗ ಕಟಾವಿಗೆ ಬಂದಿದೆ. ಸದ್ಯ ದೇಶದಲ್ಲಿ ಕೊರೊನಾ ಲಾಕ್ಡೌನ್ ಜಾರಿಯಲ್ಲಿದೆ. ಹೀಗಾಗಿ, ಕಲ್ಲಂಗಡಿ ಮಾರಾಟಕ್ಕೆ ಮಾರುಕಟ್ಟೆ ಸಿಗುತ್ತಿಲ್ಲ. ಆದರೆ, ಮಿತ್ರರೊಬ್ಬರು ವಾಟ್ಸ್‌ಆ್ಯಪ್ ಗ್ರೂಪ್‌ಗಳ ಮೂಲಕ ಕಲ್ಲಂಗಡಿ ಮಾಹಿತಿಯನ್ನು ಜನರಿಗೆ ನೀಡಿದ್ದರಿಂದ ಇದೀಗ ಕ್ವಿಂಟಲ್‌ಗಟ್ಟಲೇ ಕಲ್ಲಂಗಡಿ ಹಣ್ಣುಗಳು ನೇರವಾಗಿ ಗದ್ದೆಯಲ್ಲಿಯೇ ಗ್ರಾಹಕರಿಗೆ ಮಾರಾಟವಾಗುತ್ತಿವೆ. ಈ ಮಾಹಿತಿ ರಾಜ್ಯ ಕೃಷಿ ಸಚಿವರಿಗೂ ತಲುಪಿದೆ. ರೈತರು ಕಂಗೆಟ್ಟು ಆತ್ಮಹತ್ಯೆಯನ್ನು ಮಾಡಿಕೊಳ್ಳದೆ ಸುರೇಶ್ ನಾಯ್ಕರಂತೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವಂತೆ ಕೃಷಿಕರಿಗೆ ಕರೆ ನೀಡಿದ್ದಾರೆ.