ಬೆಳೆದ ಬೆಳೆಗೆ ಸಿಗದ ಬೆಲೆ: ಕಣ್ಣೀರು ತರಿಸುತ್ತಿದೆ ಕಲ್ಲಂಗಡಿ ಕತ್ತರಿಸುವ ರೈತರ ದೃಶ್ಯ - ಕಣ್ಣೀರು ತರಿಸುತ್ತಿದೆ ಕಲ್ಲಂಗಡಿ ಕತ್ತರಿಸುವ ರೈತರ ದೃಶ್ಯ
🎬 Watch Now: Feature Video
ಕಾರವಾರ: ಸಾಮಾನ್ಯವಾಗಿ ರೈತರು ವರ್ಷದಲ್ಲಿ ಒಂದು ಇಲ್ಲವೇ ಎರಡು ಬೆಳೆಗಳನ್ನು ಬೆಳೆಯುತ್ತಾರೆ. ಹೀಗೆ ಬೆಳೆದ ಬೆಳೆಯೇ ಅದೆಷ್ಟೋ ರೈತರ ಪಾಲಿಗೆ ಜೀವನಾಧಾರವಾಗಿದೆ. ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದ ರೈತರು ನೂರಾರು ಎಕರೆ ಜಾಗದಲ್ಲಿ ಬೆಳೆದ ಕಲ್ಲಂಗಡಿ ಲಾಕ್ಡೌನ್ ಹಾಗೂ ಹವಾಮಾನ ವೈಪರೀತ್ಯಕ್ಕೆ ಸಿಲುಕಿ ಮಣ್ಣು ಪಾಲಾಗಿದೆ. ಲಕ್ಷಾಂತರ ರೂ ಆದಾಯ ನೀಡಬೇಕಿದ್ದ ಹಣ್ಣು ಬೆಳೆಗಾರರ ಕಣ್ಣೆದುರೇ ಕೊಳೆಯುತ್ತಿರುವ ಎಂಥವರಿಗೂ ನೋವುಂಟು ಮಾಡುತ್ತದೆ.