ವಾಟರ್ ಟ್ಯಾಂಕರ್ ಡಿಕ್ಕಿ : ಮಹಿಳೆ ಸಾವು - ಬೆಂಗಳೂರು ಅಪಘಾತ ಸುದ್ದಿ
🎬 Watch Now: Feature Video
ವಾಟರ್ ಟ್ಯಾಂಕರ್ ಡಿಕ್ಕಿ ಹೊಡೆದು ಬೈಕ್ ಚಲಾಯಿಸುತ್ತಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ನಗರದ ವೈಟ್ ಫೀಲ್ಡ್ ಬಳಿಯ ಹಗದೂರು ಬಳಿ ನಡೆದಿದೆ. ಪ್ರೇಮಾ (35) ಮೃತೆ. ಆಡ್ಡಾದಿಡ್ಡಿಯಾಗಿ ಟ್ಯಾಂಕರ್ ಚಲಾಯಿಸಿಕೊಂಡು ಬಂದ ಚಾಲಕ ಚಲಿಸುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ. ಇನ್ನು ಘಟನೆಯಲ್ಲಿ ಪಾದಾಚಾರಿ ಮಹದೇವಯ್ಯ (45) ಗಂಭೀರ ಗಾಯಗೊಂಡಿದ್ದು ಅಸ್ಪತ್ರೆಗೆ ಧಾಖಲಿಸಲಾಗಿದೆ. ವೈಟ್ ಫೀಲ್ಡ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.