ಎರಡೇ ಎರಡು ಅಡಿಗಳಲ್ಲಿ ಉಕ್ಕಿ ಬಂದ ಗಂಗೆ... ಜನರಲ್ಲಿ ಅಚ್ಚರಿ! - ಕೊಪ್ಪಳ ಜಿಲ್ಲೆಯಲ್ಲಿ ಉಕ್ಕಿ ಬಂದ ನೀರು

🎬 Watch Now: Feature Video

thumbnail

By

Published : Feb 7, 2020, 10:42 AM IST

ಕೊಪ್ಪಳ: ನೂರಾರು ಅಡಿ ಬೋರ್​ವೆಲ್​ ಕೊರೆಸಿದರೂ ನೀರು ಸಿಗೋದು ಬಲುಕಷ್ಟ ಎನ್ನುವಂತಹ ಪರಿಸ್ಥಿತಿಯಿದ್ದು, ಆದರೆ ಇಲ್ಲಿ ಕೇವಲ ಎರಡು ಅಡಿ ಆಳಗಳಲ್ಲೆ ಗಂಗಾಮಾತೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದ್ದಾಳೆ. ಬರದ ನಾಡು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಹಗೆದಾಳ ಗ್ರಾಮದಲ್ಲಿ ಈ ಅಚ್ಚರಿ ನಡೆದಿದೆ. ಹಗೆದಾಳ ಗ್ರಾಮದ ಸೋಮನಗೌಡ ಎಂಬುವವರ ಜಮೀನಿನಲ್ಲಿ ಕೇವಲ ಎರಡು ಅಡಿ ಆಳದಲ್ಲಿ ನೀರು ಕಾಣಿಸಿಕೊಂಡಿದೆ. ಎರಡೇ ಎರಡು ಅಡಿಯಲ್ಲಿ ನೀರು ಜಿನುಗುತ್ತಿರುವುದರಿಂದ ಸೋಮನಗೌಡ ಕುಟುಂಬ ಫುಲ್ ಖುಷ್ ಆಗಿದ್ದು, ಈ ಅಚ್ಚರಿ ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.