ಹುಲಿ ಸೆರೆ ಆಪರೇಷನ್ನಲ್ಲಿ ಮಾರ್ಗಸೂಚಿ ಉಲ್ಲಂಘನೆ: ಅರಣ್ಯಾಧಿಕಾರಿಗಳ ವಿರುದ್ಧ ಗಂಭೀರ ಆರೋಪ - Violation of Guidelines on Tiger Capture Operation
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-12426227-thumbnail-3x2-tigerrr.jpg)
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ರೆ ವಲಯದ ನಾಯಳ್ಳಗಸ್ತಿನ ಸುತ್ತನಹಳ್ಳ ಪ್ರದೇಶದಲ್ಲಿ ಗಾಯಗೊಂಡಿದ್ದ 4-5 ವರ್ಷದ ಗಂಡು ಹುಲಿಯನ್ನು ಬಂಡೀಪುರ ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದರು. ಬಳಿಕ, ಬನ್ನೇರುಘಟ್ಟಕ್ಕೆ ರವಾನಿಸುವಾಗ ಮಾರ್ಗಮಧ್ಯೆ ಮೃತಪಟ್ಟಿತ್ತು.ಆದರೆ ಹುಲಿ ಕಾರ್ಯಾಚರಣೆ ವೇಳೆ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆ ಎಂದು ಇದೀಗ ಪರಿಸರ ಹೋರಾಟಗಾರರು ಆಕ್ರೋಶ ಹೊರಹಾಕುತ್ತಿದ್ದಾರೆ.