ಕಲಬುರಗಿ: ಅಬ್ಬರದ ಮಳೆಗೆ ಮನೆಗಳು ಜಲಾವೃತ; ಮನೆಗಳ ಮೇಲೇರಿ ಕುಳಿತ ಮಂದಿ - flood
🎬 Watch Now: Feature Video
ಮಳೆ ಅಬ್ಬರಕ್ಕೆ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಹೆಬ್ಬಾಳ ಗ್ರಾಮ ಜಲಾವೃತಗೊಂಡಿದೆ. ಇದ್ರಿಂದಾಗಿ ಪ್ರಾಣ ಉಳಿಸಿಕೊಳ್ಳಲು ಗ್ರಾಮಸ್ಥರು ಮನೆಗಳ ಮೇಲೆ ಏರಿ ಕುಳಿತಿದ್ದಾರೆ. ಬೆಣ್ಣೆತೋರಾ ಡ್ಯಾಂ ಹಿನ್ನೀರು ಕೂಡ ಹೆಚ್ಚಳವಾದ ಹಿನ್ನೆಲೆ ಹೆಬ್ಬಾಳ ಗ್ರಾಮಸ್ಥರು ಜೀವಭಯದಲ್ಲಿದ್ದಾರೆ. ಕ್ಷಣ ಕ್ಷಣಕ್ಕೂ ಜಲಾಶಯದ ಹಿನ್ನೀರು ಹೆಚ್ಚುತ್ತಿದೆ. ಹೀಗಾಗಿ ಜನರು ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ. ಈಗಾಗಲೇ ಗ್ರಾಮದ ಭಾಗಶಃ ಮನೆಗಳು ಜಲಾವೃತಗೊಂಡಿದ್ದು, ಮನೆಯಲ್ಲಿನ ವಸ್ತುಗಳು ನೀರುಪಾಲಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.