ವಿಜಯಪುರದ ಟಾಕಳಿ ಸೇತುವೆ ಮುಳುಗಡೆ: ಪ್ರತ್ಯಕ್ಷ ವರದಿ - ಟಾಕಳಿ ಸೇತುವೆ ಮುಳುಗಡೆ
🎬 Watch Now: Feature Video
ಭೀಮಾ ನದಿ ಉಕ್ಕಿ ಹರಿಯುತ್ತಿರುವ ಕಾರಣ ನದಿ ತೀರದ 8 ಸೇತುವೆಗಳು ಮುಳುಗಡೆಯಾಗಿವೆ. ಮಹಾರಾಷ್ಟ್ರ ಹಾಗೂ ಕರ್ನಾಟಕ ಸಂಪರ್ಕ ಕಲ್ಪಿಸುವ ಟಾಕಳಿ ಸೇತುವೆ ಸಹ ಸಂಪೂರ್ಣ ಮುಳಗಡೆಯಾಗಿದೆ. ಉಮರಾಣಿಯಿಂದ ಟಾಕಳಿಗೆ ಹೋಗುವ ಮಧ್ಯದ ಸೇತುವೆಯಲ್ಲಿ ಅಪಾರ ನೀರು ಹರಿಯುತ್ತಿರುವ ಕಾರಣ ಜನ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಿದ್ದಾರೆ. ಅಕ್ಕಪಕ್ಕದ ಜಮೀನುಗಳಿಗೂ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಕಾರಣ ಕಬ್ಬು, ತೊಗರಿ, ಉಳ್ಳಾಗಡ್ಡಿ, ದ್ರಾಕ್ಷಿ ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿದ ವಾಕ್ ಥ್ರೂ ಇಲ್ಲಿದೆ.