ಹೋಳಿ ಆಚರಣೆಗೆ ಬ್ರೇಕ್: ಜಿಲ್ಲಾಡಳಿತದ ವಿರುದ್ಧ ಸಾರ್ವಜನಿಕರು ಗರಂ - vijayapur district administration Prohibition of Holi celebration
🎬 Watch Now: Feature Video
ವಿಜಯಪುರ: ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತವೆ ಎಂಬ ಕಾರಣದಿಂದ ವಿಜಯಪುರ ಜಿಲ್ಲಾಡಳಿತ ಹೋಳಿ ಹಬ್ಬ ಆಚರಣೆಗೆ ನಿಷೇಧ ಹೇರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಉಪಚುನಾವಣೆ ಪ್ರಚಾರ, ಸಭೆ, ಸಮಾರಂಭಗಳಿಗೆ ತಟ್ಟದ ಕೊರೊನಾ ಮಹಾಮಾರಿ, ಹಿಂದೂಗಳ ಹಬ್ಬ ಬಂದಾಗ ಮಾತ್ರ ವ್ಯಾಪಕವಾಗಿ ಹರಡುತ್ತದೆ ಎನ್ನುವ ರಾಜ್ಯ ಸರ್ಕಾರದ ವಾದ ಒಪ್ಪಲು ಸಾಧ್ಯವಿಲ್ಲ. ಇದರಲ್ಲಿ ಹಬ್ಬವನ್ನು ಮೊಟುಕುಗೊಳಿಸುವ ಹುನ್ನಾರ ನಡೆದಿದೆ ಎಂದು ಸಾರ್ವಜನಿಕರು, ರಾಜಕೀಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.