ಶ್ರೀ ಮಂಗಳಾದೇವಿ ದೇವಳದಲ್ಲಿ 200 ಮಕ್ಕಳಿಗೆ ವಿದ್ಯಾರಂಭ - ಶ್ರೀ ಮಂಗಳಾದೇವಿ ದೇವಳದಲ್ಲಿ ಮಕ್ಕಳಿಗೆ ವಿದ್ಯಾರಂಭ
🎬 Watch Now: Feature Video
ಮಂಗಳೂರು ನಗರದ ಇತಿಹಾಸ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ವಿಜಯದಶಮಿ ಪ್ರಯುಕ್ತ ವಿದ್ಯಾರಂಭ ಸಂಸ್ಕಾರ ನೆರವೇರಿತು. ಈ ಮೂಲಕ ಸುಮಾರು 200 ಮಕ್ಕಳು ಸರಸ್ವತಿ ರೂಪಿಣಿ ಶ್ರೀ ಮಂಗಳಾಂಬೆಯ ಕೃಪೆಗೆ ಪಾತ್ರರಾದರು. ವಿಜಯದಶಮಿ ದಿನ ಮಕ್ಕಳಿಗೆ ವಿದ್ಯಾರಂಭ ಮಾಡಿದರೆ ಸರಸ್ವತಿಯ ಅನುಗ್ರಹ ಇರುತ್ತದೆ ಎಂಬ ಹಿನ್ನೆಲೆಯಲ್ಲಿ ದೇವಿಯ ದೇಗುಲಗಳಲ್ಲಿ ಈ ಸೇವೆ ಮಾಡುತ್ತಾರೆ. ಮಕ್ಕಳಿಗೆ ಅಕ್ಕಿಯಲ್ಲಿ ಓಂನಾಮ, ಶ್ರೀನಾಮ ಬರೆಯಿಸಿ ಅಕ್ಷರಾಭ್ಯಾಸ ನೆರವೇರಿಸಲಾಗುತ್ತದೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ವಿದ್ಯಾರಂಭ ಸೇವೆಯನ್ನು ದೇವಳದಲ್ಲಿ ನಡೆಸಲಾಗುತ್ತಿದೆ.
TAGGED:
Vidyarambha for children