ಪ್ರಧಾನಿ ಕರೆಗೆ ಮೈಲಾರಲಿಂಗೇಶ್ವರ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಬೆಂಬಲ.. - ಪ್ರಧಾನಿ ಕರೆಗೆ ಮೈಲಾರಲಿಂಗೇಶ್ವರ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಬೆಂಬಲ
🎬 Watch Now: Feature Video
ಹಾವೇರಿ : ಕೊರೊನಾ ವೈರಸ್ ತಡೆಗಟ್ಟಲು ಮೈಲಾರಲಿಂಗೇಶ್ವರ ಸದ್ಭಕ್ತರು ದೀಪ ಹಚ್ಚುವಂತೆ ಮೈಲಾರ ಕ್ಷೇತ್ರದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ ಮನವಿ ಮಾಡಿದ್ದಾರೆ. ಪ್ರಧಾನಿ ಮೋದಿ ಮಹಾಕ್ರೂರಿ ಕೊರೊನಾ ವೈರಸ್ ತಡೆಗೆ ಇಂದು ದೇಶದ ಜನತೆಗೆ ರಾತ್ರಿ 9 ಗಂಟೆಗೆ 9 ನಿಮಿಷ ದೀಪ ಹಚ್ಚಲು ಕೋರಿದ್ದಾರೆ. ಅದರಂತೆ ದೇಶದ ಜನತೆ ದೀಪ ಹಚ್ಚಲು ಸಿದ್ಧರಾಗಿದ್ದಾರೆ. ನಾಡಿನ ಮೈಲಾರ ಕ್ಷೇತ್ರದ ಭಕ್ತರು ಜ್ಞಾನದ, ವೈಚಾರಿಕತೆಯ ಸಂಕೇತ ದೀಪ ಹಚ್ಚುವ ಮೂಲಕ ಮಹಾಮಾರಿ ಕೊರೊನಾ ವೈರಸ್‌ನ ದೇಶದಿಂದ ತೊಲಗಿಸಲು ಶ್ರಮಿಸೋಣ ಎಂದು ಕರೆ ನೀಡಿದ್ದಾರೆ.