ಮನೆಯವರೊಂದಿಗೆ ಫೋನ್​ನಲ್ಲಿ ಮಾತನಾಡಿದ ಅನುಭವ್​.. - ಉಜಿರೆ ಬಾಲಕ ನಾಪತ್ತೆ ಪ್ರಕರಣ

🎬 Watch Now: Feature Video

thumbnail

By

Published : Dec 19, 2020, 4:28 PM IST

ಬೆಳ್ತಂಗಡಿ: ಡಿ.17 ರಂದು ಸಂಜೆ ಬೆಳ್ತಂಗಡಿ ತಾಲೂಕಿನ ಉಜಿರೆ ಸಮೀಪದ ಜನಾರ್ದನ ಸ್ವಾಮಿ ದೇವಸ್ಥಾನದ ರಥಬೀದಿಯ ಸಮೀಪದ ಉದ್ಯಮಿ ಬಿಜೋಯ್ ಏಜೆನ್ಸಿಸ್ ಮಾಲೀಕರ ಮಗ ಅನುಭವ್ (8) ಹಣಕ್ಕಾಗಿ ಅಪಹರಿಸಲಾಗಿತ್ತು. ಇದು ರಾಜ್ಯದಲ್ಲೆಡೆ ಸುದ್ದಿಯಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ನಾಲ್ಕು ತಂಡ ರಚಿಸಿ ಕಾರ್ಯಾಚರಣೆಗೆ ಇಳಿದಿದ್ದರು. ಇಂದು ಬೆಳಗ್ಗೆ ಕೋಲಾರದ ಸಮೀಪ ಮಾಲೂರಿನಲ್ಲಿ ಬಾಲಕ ಹಾಗೂ ಅಪಹರಣ ಮಾಡಿದ ಆರೋಪಿಗಳು ಪತ್ತೆಯಾಗಿದ್ದರು. ಇದೀಗ ಅನುಭವ್ ತನ್ನ ಅಜ್ಜ - ಅಜ್ಜಿ, ಅಣ್ಣ ಹಾಗೂ ದೊಡ್ಡಮ್ಮನ ಜೊತೆ ಪೋನ್ ನಲ್ಲಿ ಮಾತನಾಡಿದ್ದು, ಮನೆಯಲ್ಲಿ ಸಂತಸ ಮೂಡಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.