ಜಲಧಾರೆಯಿಂದ ಅಬ್ಬರಿಸುತ್ತಿರುವ ತುಂಗಭದ್ರೆ.. ಸ್ವಪ್ನ ಬೃಂದಾವನ ಮುಳುಗಡೆ.. - kannadanews
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4110897-thumbnail-3x2-surya.jpg)
ರಾಯಚೂರು: ಜಿಲ್ಲೆಯಲ್ಲಿ ಮಳೆ ಇಲ್ಲದಿದ್ದರೂ ಒಂದೆಡೆ ಕೃಷ್ಣೆ, ಇನ್ನೊಂದೆಡೆ ತುಂಗಭದ್ರೆ ಪ್ರವಾಹ ರಾಯಚೂರು ಜಿಲ್ಲೆಯನ್ನ ತತ್ತರಿಸುವಂತೆ ಮಾಡಿದೆ.
ತುಂಗಭದ್ರಾ ಜಲಾಶಯದಿಂದ 3 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿ ಬಿಡಲಾಗುತ್ತಿದೆ. ಪರಿಣಾಮ ರಾಯಚೂರು ಜಿಲ್ಲೆಯ ಸಿಂಧನೂರು, ಮಾನ್ವಿ ಮತ್ತು ರಾಯಚೂರು ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ. ಅಲ್ಲದೇ ರಾಯಚೂರು ತಾಲೂಕಿನ ಎಲೆಬಿಚ್ಚಾಲಿ ಗ್ರಾಮದ ಸ್ವಪ್ನ ಬೃಂದಾವನ ನೀರಿನಲ್ಲಿ ಮುಳುಗಡೆಯಾಗಿದೆ. ತುಂಗಭದ್ರಾ ನದಿ ತಟದಲ್ಲಿರುವ ಶ್ರೀ ಮಠದ ಸ್ನಾನ ಘಟ್ಟದವರೆಗೆ ನೀರು ಬಂದಿದೆ. ಹಾಗೆಯೇ ಮಾನ್ವಿಯ ಚೀಕಲಪರ್ವಿ ಗ್ರಾಮದ ಐತಿಹಾಸಿಕ ವಿಜಯದಾಸರ ಕಟ್ಟೆ ಹತ್ತಿರ ಕೂಡ ನೀರು ಬಂದಿದೆ. ಹೀಗಾಗಿ ನದಿ ಹತ್ತಿರ ದನ-ಕರು, ಜನರು ಹೋಗದಂತೆ ತಾಲೂಕು ಆಡಳಿತ ಮುನ್ನೆಚ್ಚರಿಕೆ ವಹಿಸಿದೆ.