ಖಾಸಗಿ ಚಾಲಕ, ನಿರ್ವಾಹಕರಿಂದ ಬಸ್ ಸಂಚಾರಕ್ಕೆ ಮುಂದಾದ ಬಿಎಂಟಿಸಿ: ಸಾರಿಗೆ ನೌಕರರ ಆಕ್ರೋಶ - ಮುಂದುವರೆದ ಸಾರಿಗೆ ನೌಕರರ ಮುಷ್ಕರ
🎬 Watch Now: Feature Video
ಬೆಂಗಳೂರು: ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇಂದೂ ಕೂಡ ಸಾರಿಗೆ ನೌಕರರು ಮುಷ್ಕರ ಮುಂದುವರೆಸಿದ್ದು, ಇದರಿಂದ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ. ಈ ನಡುವೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ ತಪ್ಪಿಸಲೆಂದು ಬಿಎಂಟಿಸಿ ಅಧಿಕಾರಿಗಳು ಖಾಸಗಿ ಚಾಲಕ, ನಿರ್ವಾಹಕರ ಮೊರೆ ಹೋಗಿದ್ದರು. ಇದಕ್ಕೆ ಆಕ್ರೋಶಗೊಂಡ ಪ್ರತಿಭಟನಾಕಾರರು, ಚಾಲಕನನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಚಾಲಕರೊಬ್ಬರನ್ನು ರಕ್ಷಣೆ ಮಾಡಿದರು.