ಏಯ್ ಕೊಡೋ, ಕೊಟ್ಹೋಗೋ.. ಚಾಮರಾಜನಗರ ಟ್ರಾಫಿಕ್ ಎಎಸ್ಐ 'ಎತ್ತುವಳಿ'.. ವಿಡಿಯೋ! - ವಾಹನ ದಾಖಲೆಯನ್ನು ಪರಿಶೀಲಿಸದೆ ಹಣ ಪಡೆದ
🎬 Watch Now: Feature Video

ಚಾಮರಾಜನಗರ: ಸಂಚಾರಿ ಠಾಣೆ ಎಎಸ್ಐ ವಾಹನ ತಪಾಸಣೆ ವೇಳೆ ಲಾರಿ ತಡೆದು ಚಾಲಕನಿಂದ ಹಣ ಪಡೆದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ರಾಫಿಕ್ ಎಎಸ್ಐ ಅಫ್ಜಲ್ ಬೇಗ್ ಹಣ ಪಡೆದವರು ಎನ್ನಲಾಗಿದೆ. ಹೋಂ ಗಾರ್ಡ್‌ವೊಬ್ಬ ವಾಹನ ತಡೆದು ಚಾಲಕನನ್ನು ಅವರ ಬಳಿ ಕರೆದೊಯ್ತಾನೆ. ಈ ವೇಳೆ ಬೇಗ್ ವಾಹನ ದಾಖಲೆ ಪರಿಶೀಲಿಸದೆ ಚಾಲಕನೊಂದಿಗೆ ಜಾಲಿಯಾಗಿ ಮಾತನಾಡಿ ರಾಜಾರೋಷವಾಗಿ ಆತನಿಂದ ಹಣ ಪಡೆದು ಜೇಬಿಗಿಳಿಸಿಕೊಂಡಿದ್ದಾರೆ. ಬಳಿಕ ವಾಹನ ತೆಗೆದುಕೊಂಡು ಹೋಗುವಂತೆ ಚಾಲಕನಿಗೆ ಹೇಳುವುದು ವಿಡಿಯೋದಲ್ಲಿ ಸೆರೆಯಾಗಿದೆ.
Last Updated : Feb 22, 2020, 7:58 PM IST