ಏಳು ಸುತ್ತಿನ ಕೋಟೆಗೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಭೇಟಿ - ವಾಸೋದ್ಯಮ ಸಚಿವ ಸಿ ಟಿ ರವಿ
🎬 Watch Now: Feature Video
ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಏಳು ಸುತ್ತಿನ ಕೋಟೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದರು. ಸಚಿವರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ ಸಚಿವರಿಗೆ ಬೆಂಬಲಿಗರು, ಅಭಿಮಾನಿಗಳು ಸ್ವಾಗತ ಕೋರಿದರು. ನಗರಕ್ಕೆ ಬರುವ ಮಾರ್ಗ ಮಧ್ಯೆ ಎದುರಾದ ಕನಕದಾಸರ ಪ್ರತಿಮೆ, ಅಂಬೇಡ್ಕರ್ ಹಾಗೂ ಒನಕೆ ಓಬವ್ವ ಪ್ರತಿಮೆಗಳಿಗೆ ಹೂವಿನ ಹಾರ ಹಾಕಿ ನಮಿಸಿದರು. ನಂತರ ಅದೇ ಮಾರ್ಗದಿಂದ ಕೋಟೆಗೆ ಭೇಟಿ ನೀಡಿದ ಅವರು, ಮದ್ದು ಬೀಸುವ ಕಲ್ಲು, ಗಾರೆ ಅರೆಯುವ ಕಲ್ಲು, ಉಯ್ಯಾಲೆ ಕಂಬ ಮುಂತಾದ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಿದರು. ಬಳಿಕ ಕೋಟೆಯೊಳಗೆ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ನಿರ್ಗಮಿಸಿದರು.