ಸಿಎಎ ಪ್ರತಿಭಟನೆ ನಡೆಯಬೇಕಿದ್ದ ಮೈದಾನದಲ್ಲಿ ಸುಂಟರಗಾಳಿ: ಕುರ್ಚಿಗಳು ದಿಕ್ಕಾಪಾಲು - Tornado at Belapu of Udupi
🎬 Watch Now: Feature Video
ಉಡುಪಿ: ಸಿಎಎ ವಿರುದ್ಧ ಪ್ರತಿಭಟನೆ ನಡೆಯಬೇಕಿದ್ದ ಮೈದಾನದಲ್ಲಿ ಸುಂಟರಗಾಳಿ ಎದ್ದ ಪರಿಣಾಮ ಪ್ರತಿಭಟನಾ ಸಭೆಗೆ ತಂದಿದ್ದ ಕುರ್ಚಿಗಳು ಗಾಳಿಯಲ್ಲಿ ತೇಲಾಡಿದ ಘಟನೆ ಕಾಪು ತಾಲೂಕಿನ ಬೆಳಪು ಎಂಬಲ್ಲಿ ನಡೆದಿದೆ. ಬೆಳಪು ಗ್ರಾಮದ ಮಲ್ಲಾರ್ ಮುಸ್ಲಿಂ ಒಕ್ಕೂಟದಿಂದ ಶನಿವಾರ ಸಿಎಎ ವಿರೋಧಿ ಪ್ರತಿಭಟನೆ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ಈ ವೇಳೆ ಹಠಾತ್ತನೇ ಎದ್ದ ಸುಂಟರಗಾಳಿ, ಕಾರ್ಯಕ್ರಮಕ್ಕೆ ತಂದಿಟ್ಟಿದ್ದ ಕುರ್ಚಿಗಳು ಸೇರಿದಂತೆ ಧೂಳು, ಕಸ, ಕಡ್ಡಿ ಎಲ್ಲವನ್ನೂ ನೆಲದಿಂದ ಚಿಮ್ಮಿಸಿದೆ.