ಜಮೀನಿನಲ್ಲಿ ಮರಿಗಳೊಂದಿಗೆ ಹುಲಿ ಓಡಾಟ: ವಿಡಿಯೋ ವೈರಲ್ - tiger walking with cubs
🎬 Watch Now: Feature Video
ಚಾಮರಾಜನಗರ: ಹುಲಿ ಭೀತಿಯಿಂದ ತತ್ತರಿಸುತ್ತಿರುವ ತಾಲೂಕಿನ ಅರಕಲವಾಡಿ ಸುತ್ತಮುತ್ತ ಗ್ರಾಮಗಳಲ್ಲಿ ಮತ್ತಷ್ಟು ಭಯ ಹುಟ್ಟಿಸುವಂತಹ ವಿಡಿಯೋವೊಂದು ವೈರಲ್ಲಾಗುತ್ತಿದೆ. ಎಲಚಿಕರೆ ಎಲ್ಲೆಯ ಜಮೀನು ಸಮೀಪದ ಕಾಲುದಾರಿಯಲ್ಲಿ ಹೆಣ್ಣು ಹುಲಿಯೊಂದು ಮರಿಗಳೊಟ್ಟಿಗೆ ಓಡಾಡುತ್ತಿರುವ ವಿಡಿಯೋವನ್ನು ಕಾರಿನಲ್ಲಿ ಸಂಚರಿಸುತ್ತಿದ್ದವರು ಸೆರೆ ಹಿಡಿದಿದ್ದಾರೆ ಎನ್ನಲಾಗಿದೆ. ಹುಲಿ ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.