ಬಂಡೀಪುರ: ವ್ಯಾಘ್ರನನ್ನೇ ಅಟ್ಟಾಡಿಸಿದ ಗಜರಾಜ - ವಿಡಿಯೋ - Tiger Chased Elephant in Bandipura news
🎬 Watch Now: Feature Video
ಚಾಮರಾಜನಗರ: ಕಾಡಿನಲ್ಲಿ ತನ್ನದೇ ಗಡಿಯನ್ನು ಹಾಕಿಕೊಂಡು ಬದುಕುವ ಹುಲಿರಾಯನನ್ನು ಆನೆಯೊಂದು ಬೆದರಿಸಿ ಅಟ್ಟಾಡಿಸಿರುವ ದೃಶ್ಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಕಂಡುಬಂದಿದೆ. ಬಂಡೀಪುರ ಸಫಾರಿಯ ಕಡಂಬತ್ತೂರು ಕಟ್ಟೆಯ ಕೆರೆ ಸಮೀಪ ಕುಳಿತಿದ್ದ ಹುಲಿಯನ್ನು ಆನೆಯೊಂದು ಬೆದರಿಸಿ ಓಡಿಸಿ ಕೊನೆಗೆ ಅದು ಪೊದೆಯೊಳಗೆ ನುಗ್ಗಿದರೂ ದಾಳಿ ಮಾಡಲು ತಡಕಾಡುವ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ. ಹುಲಿ ಹಾಗೂ ಆನೆಯ ವಿಡಿಯೋವನ್ನು ಪ್ರವಾಸಿಗರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಈಟಿವಿ ಭಾರತಕ್ಕೆ ಲಭ್ಯವಾಗಿದೆ.