ಮೈಸೂರು: ಟಿಬೇಟಿಯನ್ ಹೊಸ ವರ್ಷಾಚರಣೆ ಸಂಭ್ರಮ - ಟಿಬೇಟಿಯನ್ರ ಹೊಸ ವರ್ಷಾಚರಣೆ ಸುದ್ದಿ
🎬 Watch Now: Feature Video

ಮೈಸೂರು: ಬೈಲುಕುಪ್ಪೆಯ ಟಿಬೇಟಿಯನ್ ನಿರಾಶ್ರಿತರ ಶಿಬಿರದಲ್ಲಿ ಸಾಂಪ್ರದಾಯಿಕವಾಗಿ ಹೊಸ ವರ್ಷವನ್ನು ಆಚರಿಸಲಾಯಿತು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯಲ್ಲಿ ಇರುವ ಟಿಬೇಟಿಯನ್ ನಿರಾಶ್ರಿತರ ಶಿಬಿರದಲ್ಲಿ ಪ್ರತಿವರ್ಷ ಫೆಬ್ರವರಿ 13 ರಂದು ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆದರೆ, ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಟಿಬೇಟಿಯನ್ ಹೊಸ ವರ್ಷಾಚರಣೆ ಜರುಗಿತು.