ಐಪಿಎಸ್ ಮಾಡುವ ಕನಸು ಕಂಡಿದ್ರಂತೆ ಈ ಯುವ ನಟಿ - Adwithi Shetty of Mr. and Mrs. Ramachari fame
🎬 Watch Now: Feature Video
ಕನ್ನಡ ಚಿತ್ರರಂಗದಲ್ಲಿ ಎಂಜಿನಿಯರಿಂಗ್ ಮಾಡಿರುವ ಸಾಕಷ್ಟು ತಾರೆಯರು, ಸಿನಿಮಾ ಸ್ಟಾರ್ಗಳು ತೆರೆ ಮೇಲೆ ರಾರಾಜಿಸುತ್ತಿದ್ದಾರೆ. ಇದೀಗ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಸಿನಿಮಾ ಮೂಲಕ ಗಮನ ಸೆಳೆದಿರುವ ನಟಿ ಅದ್ವಿತಿ ಶೆಟ್ಟಿ ಪೂರ್ಣ ಪ್ರಮಾಣದ ನಾಯಕಿಯಾಗಿ ಮಿಂಚುತ್ತಿದ್ದಾರೆ. ಸದ್ಯ ಐರಾವನ್ ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಐಪಿಎಸ್ ಮಾಡುವ ಕನಸು ಹೊಂದಿದ್ದ ಅದ್ವಿತಿ ಶೆಟ್ಟಿ, ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಯಾಗಿದ್ದು ಹೇಗೆ? ಯಾರಿಗೋಸ್ಕರ ಅದ್ವಿತಿ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಬ್ಯುಸಿ ಇರ್ತಾರೆ? ಯಾವ ಕನ್ನಡದ ನಟ ಮತ್ತು ನಟಿ ಅದ್ವಿತಿ ಶೆಟ್ಟಿಗೆ ಸ್ಫೂರ್ತಿ? ಹೀಗೆ ಹಲವಾರು ವಿಚಾರಗಳನ್ನು ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ.