ಈ ಬಾರಿ ಹುಕ್ಕೇರಿ ಮಠದ ಜಾತ್ರೆ ಸರಳವಾಗಿ ಆಚರಿಸಲು ನಿರ್ಧಾರ: ಸದಾಶಿವ ಶ್ರೀಗಳು - Haveri Latest News
🎬 Watch Now: Feature Video
ಹಾವೇರಿ: ಉತ್ತರಕರ್ನಾಟಕ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಹುಕ್ಕೇರಿಮಠದ ಜಾತ್ರೆಯನ್ನು ಈ ಬಾರಿ ಸರಳವಾಗಿ ಆಚರಿಸಲು ನಿರ್ಧರಿಸಿರುವುದಾಗಿ ಸದಾಶಿವ ಶ್ರೀಗಳು ತಿಳಿಸಿದ್ದಾರೆ. ಜ. 22 ರಂದು ಶಿವಬಸವ ಶ್ರೀಗಳ ಜನ್ಮಸ್ಥಳ ಅಥಣಿ ತಾಲೂಕಿನ ಸಪ್ತಸಾಗರದಿಂದ ಶಿವಬಸವ ಜ್ಯೋತಿ ಯಾತ್ರೆ ಕೈಗೊಳ್ಳಲಾಗಿದೆ. 23ರಂದು ಮೂಜಗಂ ಅವರಿಗೆ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. 24ರಂದು ಶಿವಬಸವ ಶ್ರೀಗಳ 75ನೇ ಮತ್ತು ಶಿವಲಿಂಗ ಶ್ರೀಗಳ 12ನೇ ಪುಣ್ಯಸ್ಮರಣೋತ್ಸವ ಆಚರಿಸಲಾಗುವುದು. ಅಂದು ಉಭಯ ಶ್ರೀಗಳ ಗದ್ದುಗೆ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಲಾಗುವುದು ಎಂದರು.