ಧಾರವಾಡದಲ್ಲಿ ಸರಣಿ ಮನೆಗಳ್ಳತನ: ರಾತ್ರಿ ಖದೀಮರ ಓಡಾಟ ಸಿಸಿಟಿವಿಯಲ್ಲಿ ಸೆರೆ - ಧಾರವಾಡ ಲೇಟೆಸ್ಟ್ ನ್ಯೂಸ್

🎬 Watch Now: Feature Video

thumbnail

By

Published : Feb 13, 2021, 12:49 PM IST

ಧಾರವಾಡ: ಧಾರವಾಡದಲ್ಲಿ ಸರಣಿ ಮನೆಗಳ್ಳತನ ಪ್ರಕರಣ ನಡೆದಿದ್ದು, 4 ಮನೆಗಳಿಗೆ ನುಗ್ಗಿ‌ ಖದೀಮರು ಕನ್ನ ಹಾಕಿದ್ದಾರೆ. ನಗರದ ಮದಿಹಾಳ ಪ್ರದೇಶದ 3 ಮನೆ ಸೇರಿದಂತೆ ಎಂಆರ್ ನಗರದ ಒಂದು ಮನೆಯಲ್ಲಿ ಕಳ್ಳತನವಾಗಿದೆ. ಮದಿಹಾಳದ ಅಸ್ಲಾಂ ಮುಲ್ಲಾ ಎನ್ನುವರಿಗೆ ಸೇರಿದ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದಾರೆ. ಇತ್ತೀಚೆಗೆ‌ ನಗರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಸದ್ಯ ಸ್ಥಳಕ್ಕೆ ಶ್ವಾನದಳ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾತ್ರಿ ವೇಳೆ ಕಳ್ಳರು ನಗರದೆಲ್ಲೆಡೆ ಸುತ್ತಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಹೌದು, ಎಂಟರಿಂದ ಒಂಭತ್ತು ಕಳ್ಳರು ಕೈಯಲ್ಲಿ ಆಯುಧ ಹಿಡಿದು ನಗರದೆಲ್ಲೆಡೆ ತಿರುಗಾಡಿರುವ ದೃಶ್ಯಗಳು ಸೆರೆಯಾಗಿವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.