ಬಿಸಿಲನಾಡಿಗೆ ಮತ್ತೆ ವರುಣನ ಆಗಮನ... ರೈತರ ಮೊಗದಲ್ಲಿ ಮಂದಹಾಸ - the raining again in koppala
🎬 Watch Now: Feature Video
ಕೊಪ್ಪಳದಲ್ಲಿ ಮಳೆ ಮತ್ತೆ ಪ್ರಾರಂಭವಾಗಿದೆ. ಕಳೆದ ವಾರ ಸಾಧಾರಣ ಮಳೆಯಿಂದ ನಾಲ್ಕಾರು ದಿನಗಳಿಂದ ಬಿಡುವು ಕೊಟ್ಟಿದ್ದ ವರುಣ ಮತ್ತೆ ಬಿಸಿಲನಾಡಿನತ್ತ ಮುಖ ಮಾಡಿದ್ದಾನೆ. ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದ ವೇಳೆಗೆ ಜಿಲ್ಲೆಯ ಹಲವೆಡೆ ಅಲ್ಲಲ್ಲಿ ಮಳೆ ಬೀಳಲು ಶುರುವಾಯಿತು. ನಗರದಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಮೋಡ ಕವಿದ ವಾತಾವರಣ ಮುಂದುವರೆದಿದೆ. ಈಗ ಜಿಲ್ಲೆಯ ಯಲಬುರ್ಗಾ, ಕುಕನೂರು ತಾಲೂಕಿನ ಕೆಲವೆಡೆ ಹೆಸರು ಬೆಳೆ ಬಂದಿದ್ದು, ಕಟಾವಿಗೆ ಮಳೆಯಿಂದ ಒಂದಿಷ್ಟು ಅಡ್ಡಿಯಾಗುತ್ತಿದೆ ಎನ್ನುತ್ತಾರೆ ಆ ಭಾಗದ ರೈತರು.
TAGGED:
the raining again in koppala