ರಸ್ತೆ ಬದಿಯ ವ್ಯಾಪಾರಕ್ಕೆ ಬ್ರೇಕ್ ಹಾಕಿದ ಪೊಲೀಸ್ ಇಲಾಖೆ - ನವೋದಯ ಮೆಡಿಕಲ್ ಕಾಲೇಜ್
🎬 Watch Now: Feature Video
ಸಂಚಾರ ನಿಯಮ ಪಾಲನೆಗೆ ಒತ್ತು ನೀಡಿ ಸುಗಮ ಸಂಚಾರಕ್ಕೆ ಅನುವು ನೀಡಿದ ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆ ರಸ್ತೆ ಬದಿಯ ವ್ಯಾಪಾರಕ್ಕೆ ಸಂಪೂರ್ಣ ಬ್ರೇಕ್ ಹಾಕಲು ಮುಂದಾಗಿದೆ. ಕಳೆದ ಹಲವಾರು ದಿನಗಳಿಂದ ರಸ್ತೆ ಬದಿಯ ಪಾನ್, ಹಣ್ಣು, ತರಕಾರಿ, ಚಾಹದಂಗಡಿ
ತೆರವು ಮಾಡಲಾಗುತ್ತಿದೆ. ನಗರದ ಮಂತ್ರಾಲಯ ಹೆದ್ದಾರಿ ರಸ್ತೆಯ ಮೂಲಕ ನವೋದಯ ಮೆಡಿಕಲ್ ಕಾಲೇಜ್ ಮುಂದಗಡೆಯ ಹಾಗೂ ಸ್ಟೇಷನ್ ರಸ್ತೆ ವೃತ್ತ, ಪಾದಾಚಾರಿ ರಸ್ತೆ ಬದಿಯಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುವ ಅಂಗಡಿಗಳನ್ನು ತೆರವು ಮಾಡಲಾಗುತ್ತಿದೆ.