ದೊಡ್ಡಮ್ಮ-ಚಿಕ್ಕಮ್ಮ ದೇವಾಲಯದ ಉದ್ಘಾಟನೆ: ಪುಷ್ಪವೃಷ್ಠಿ ಮೂಲಕ ಹೆಚ್.ಡಿ ದೇವೇಗೌಡರಿಗೆ ಸ್ವಾಗತ - ತುಮಕೂರು ತಾಲೂಕು ಅರೇಹಳ್ಳಿ ಗ್ರಾಮ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5001687-thumbnail-3x2-tmk.jpg)
ತುಮಕೂರು ತಾಲೂಕು ಅರೇಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ದೊಡ್ಡಮ್ಮ-ಚಿಕ್ಕಮ್ಮ ದೇಗುಲವನ್ನು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಇಂದು ಉದ್ಘಾಟಿಸಿದರು. ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ನೂತನವಾಗಿ ಈ ದೇಗುಲವನ್ನು ನಿರ್ಮಿಸಿದ್ದು, ಮದುವಣಗಿತ್ತಿಯಂತೆ ಅರೇಹಳ್ಳಿ ಗ್ರಾಮವನ್ನು ಸಜ್ಜುಗೊಳಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ದೇವೇಗೌಡರನ್ನು ಹೊನ್ನುಡಿಕೆಯಿಂದ ಅರೇಹಳ್ಳಿಯ ದೇವಸ್ಥಾನದವರೆಗೂ ಪುಷ್ಪವೃಷ್ಠಿ ಮೂಲಕ ರಥದಲ್ಲಿ ಮೆರವಣಿಗೆ ಮಾಡಲಾಯಿತು. ಡೊಳ್ಳು ಕುಣಿತ, ನಂದಿಧ್ವಜ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮತ್ತಷ್ಟು ಮೆರುಗು ತಂದವು. ಇದೇ ವೇಳೆ ದೇಗುಲದ ಬಳಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕ ಗೌರಿಶಂಕರ್, ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ತಿಪ್ಪೇಸ್ವಾಮಿ, ತೂಪಲ್ಲಿ ಚೌಡರೆಡ್ಡಿ ಭಾಗವಹಿಸಿದರು.
Last Updated : Nov 8, 2019, 8:43 PM IST