ಕೊರೋನಾ ಭೀತಿ ಹಿನ್ನೆಲೆ ಹೆಲ್ಮೆಟ್ ಧರಿಸಿ ಬಸ್ ಓಡಿಸಿದ ಚಾಲಕ..! - corona virus'
🎬 Watch Now: Feature Video
ಕೊಡಗು: ರಾಜ್ಯದಲ್ಲಿ ಕೊರೊನಾ ಭೀತಿ ತೀವ್ರವಾಗಿ ಕಾಡುತ್ತಿದ್ದು, ಮಾಸ್ಕ್ ಸಿಗದ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಬಸ್ ಚಾಲಕರೊಬ್ಬರು ಹೆಲ್ಮೆಟ್ ಧರಿಸಿ ಬಸ್ ಚಾಲನೆ ಮಾಡಿದ್ದಾರೆ. ಮಡಿಕೇರಿ ಘಟಕದ ಉಷಾಕುಮಾರ್ ಅವರು ಮಡಿಕೇರಿ- ಕುಶಾಲನಗರ ಮಾರ್ಗದಲ್ಲಿ ಸಂಚರಿಸುವ ಬಸ್ಗೆ ಚಾಲಕರು. ಕೊಡಗಿನಲ್ಲೂ ಕೊರೊನಾ ವೈರಸ್ ಸೋಂಕಿತ ಶಂಕಿತರು ಪತ್ತೆಯಾಗುತ್ತಿದ್ದಂತೆ ಜನರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ಉಷಾಕುಮಾರ್ ಮಾಸ್ಕ್ಗಾಗಿ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. ಮಾಸ್ಕ್ ಸಿಗದ ಹಿನ್ನೆಲೆಯಲ್ಲಿ ಈ ರೀತಿ ಮಾಡಿದ್ದಾರೆ.