ಕರ್ತವ್ಯನಿರತ ಪೌರಕಾರ್ಮಿಕ ಸಾವು... ಪಾಲಿಕೆ ಎದುರು ಶವ ಇಟ್ಟು ಪ್ರತಿಭಟನೆ - ಶವ ಇಟ್ಟು ಪ್ರತಿಭಟನೆ
🎬 Watch Now: Feature Video
ಹುಬ್ಬಳ್ಳಿ: ಕೆಲಸ ಮಾಡುತ್ತಿರುವಾಗಲೇ ಪಾಲಿಕೆ ಪೌರಕಾರ್ಮಿಕನೋರ್ವ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಪ್ರಕಾಶ ಚಿಕ್ಕತುಂಬಳ ಮೃತಪಟ್ಟ ಪೌರಕಾರ್ಮಿಕ. ಈತ ಕರ್ತವ್ಯದರಲ್ಲಿರುವಾಗ ಹೃದಯಾಘಾತದಿಂದ ಸಾವನ್ನಪ್ಪಿದರೂ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಸ್ಥಳಕ್ಕೆ ಪಾಲಿಕೆ ಸಿಬ್ಬಂದಿ ಬಂದಿಲ್ಲ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಮೃತನ ಸಂಬಂಧಿಗಳು ಪಾಲಿಕೆ ಎದುರು ಶವವಿಟ್ಟು ಕೆಲ ಕಾಲ ಪ್ರತಿಭಟನೆ ನಡೆಸಿದರು. ಕರ್ತವ್ಯದಲ್ಲಿರುವಾಗ ಸಾವನ್ನಪ್ಪಿದ ಪೌರಕಾರ್ಮಿಕನ ಕುಟುಂಬಕ್ಕೆ ಸೌಜನ್ಯಕ್ಕೂ ಸಾಂತ್ವನ ಹೇಳಲು ಅಧಿಕಾರಿಗಳು ಬಂದಿಲ್ಲ ಎಂದು ಕಿಡಿಕಾರಿದರು.