ಕಿರುತೆರೆಯಲ್ಲಿ ಎಲ್ಲರ ಮೆಚ್ಚುಗೆಯ ಸ್ವಾತಿ... ಇಂದು ಮತ್ತೆ ಮನಸಾರೆಯಲ್ಲಿ ... - 90ರ ದಶಕದಲ್ಲಿ ನಟಿಸುತ್ತಿದ್ದ ನಟಿ ಸ್ವಾತಿ
🎬 Watch Now: Feature Video
ಕಿರುತೆರೆ ಲೋಕದಲ್ಲಿ ಅದರಲ್ಲೂ 90ರ ದಶಕದಲ್ಲಿ ನಟಿಸುತ್ತಿದ್ದ ನಟಿ ಸ್ವಾತಿ ಎಲ್ಲರಿಗೂ ಚಿರಪರಿಚಿತ. ಸುಮಾರು 12 ವರ್ಷಗಳ ಕಾಲ ಬ್ರೇಕ್ ಪಡೆದು ನಂತರ ಇಂಡಸ್ಟ್ರಿಗೆ ಬಂದ ಇವರು ಇಂದು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.ಒಂದರ ನಂತರ ಒಂದು ಧಾರವಾಹಿಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ತಮ್ಮದೇ ಆದ ಚಾಪು ಮೂಡಿಸಿರುವ ಇವರು, ಇದೀಗ ಉದಯ ವಾಹಿನಿಯಲ್ಲಿ ಆರಂಭವಾಗಲಿರುವ ಮನಸಾರೆ ಎಂಬ ಧಾರಾವಾಹಿಯಲ್ಲಿ 'ದೇವಕಿ' ಪಾತ್ರ ನಿರ್ವಹಿಸುತ್ತಿರುವ ಇವರು ಒಟ್ಟಾರೆ ತಮ್ಮ ಕಿರುತೆರೆ ಪಯಣ ಹಾಗೂ ತಮ್ಮ ಪಾತ್ರದ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದಾರೆ.