ಸೂರ್ಯ ಯಾವುದೇ ಬ್ಯಾಕ್ಟಿರಿಯಾ, ವೈರಸ್ ಕಳುಹಿಸುವುದಿಲ್ಲ: ಪ್ರೊ. ರವಿವರ್ಮ ಕುಮಾರ್
🎬 Watch Now: Feature Video
ಕಂಕಣ ಸೂರ್ಯಗ್ರಹಣದ ಸಮಯದಲ್ಲಿ ಆಹಾರ ಸೇವನೆ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ನ್ಯಾಯವಾದಿ ಪ್ರೊ. ರವಿವರ್ಮ ಕುಮಾರ್ ತಿಳಿಸಿದರು. ಗ್ರಹಣ ವೇಳೆ ಸ್ವತಃ ತಾವೇ ಆಹಾರ ಸ್ವೀಕರಿಸಿ ನಂತರ ಈಟಿವಿ ಭಾರತ್ ಜೊತೆ ಮಾತುಕತೆ ನಡೆಸಿದ ಅವರು, ಗ್ರಹಣ ಮನುಷ್ಯನ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಜನತೆಯನ್ನ ಮೋಸ ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆಯುವ ಪ್ರಯತ್ನ ನಡೆಯುತ್ತಿದೆ. ಸೂರ್ಯನು ಯಾವುದೇ ರೀತಿಯ ಬ್ಯಾಕ್ಟಿರಿಯಾ, ವೈರಸ್ ಕಳುಹಿಸುವುದಿಲ್ಲ. ಹೀಗಾಗಿ ಈ ವೇಳೆ ಊಟ ಸೇವಿಸಿದರೆ ಯಾವುದೇ ಆರೋಗ್ಯ ತೊಂದರೆಯಾಗಲ್ಲ ಎಂದು ಸ್ಪಷ್ಟಪಡಿಸಿದರು.