ಹಾಡಿನ ಮೂಲಕ ಮೋಡಿ ಮಾಡುವ ಸುಮಲತಾ ಅಭಿಮಾನಿ..! ಹೇಗೆ ಅನ್ನೋರು ಇಲ್ಲಿ ಒಮ್ಮೆ ಕೇಳಿ - ಲೋಕಸಭಾ ಚುನಾವಣೆ
🎬 Watch Now: Feature Video
ಭಾರೀ ಕುತೂಹಲ ಮೂಡಿಸಿರುವ ಮಂಡ್ಯದ ಲೋಕಸಭಾ ಚುನಾವಣೆ ಕುರಿತು ಗೀತೆಯೊಂದನ್ನು ರಚಿಸಿರುವ ಮೂಲಕ ವಿಜಯಪುರದ ಕಲಾವಿದನೋರ್ವ ಸುಮಲತಾ ಅವರಿಗೆ ಬೆಂಬಲ ನೀಡಿದ್ದಾರೆ. ಸುಮಲತಾ ಅವರಿಗಾಗಿ ಹಾಡು ರಚಿಸಿದ ಕಲಾವಿದ ಪ್ರಕಾಶ್ ಹಾಡು ಹಾಡುವ ಮೂಲಕ ವಿನೂತನವಾಗಿ ಮತಯಾಚನೆ ಮಾಡಿದ್ದಾರೆ. ತಮ್ಮ ಹಾಡಿನಲ್ಲಿ ಸುಮಲತಾ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರನ್ನು ಹಾಡಿ ಹೊಗಳಿದ್ದಾರೆ. ಅಲ್ಲದೆ ಸುಮಲತಾ ಅವರ 20ನೇ ನಂಬರ್ಗೆ ಓಟು ಹಾಕಿ ಅವರನ್ನು ಗೆಲ್ಲಿಸುವಂತೆಯೂ ಮಂಡ್ಯ ಜನತೆಗೆ ಮನವಿ ಮಾಡಿದ್ದಾರೆ. 4 ನಿಮಿಷ 45 ಸೆಕೆಂಡ್ ಇರುವ ಈ ಹಾಡನ್ನು ಪ್ರಕಾಶ್, ತಮ್ಮ ಫೇಸ್ಬುಕ್ ಖಾತೆಯಲ್ಲಿ ಹರಿಬಿಟ್ಟಿದ್ದಾರೆ. ಮತದಾರರನನ್ನು ಮೋಡಿ ಮಾಡಿರುವ ಈ ಹಾಡಿಗೆ ಇದೀಗ ಸಾಕಷ್ಟು ಲೈಕ್ ಹಾಗೂ ಕಮೆಂಟ್ಗಳು ಸಿಗುತ್ತಿವೆ. ನೀವು ಒಮ್ಮೆ ಕೇಳಿ...