ವಿ.ವಿ.ಗಳಲ್ಲಿ ಅಂಕಪಟ್ಟಿಗೆ ಹೆಚ್ಚು ಹಣ ವಸೂಲಿ: ಸರ್ಕಾರದ ನೀತಿ ಖಂಡಿಸಿ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ - Student council protests
🎬 Watch Now: Feature Video
ಬೆಳಗಾವಿ : ವಿಶ್ವವಿದ್ಯಾಲಯಗಳಲ್ಲಿ ಅಂಕಪಟ್ಟಿ ನೀಡಲು ಹೆಚ್ಚು ಹಣ ಪಡೆಯುತ್ತಿರುವ ಸರ್ಕಾರದ ನೀತಿ ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಆರ್ಪಿಡಿ ವೃತದ ಬಳಿ ನೂರಾರು ವಿದ್ಯಾರ್ಥಿಗಳು ಸೇರಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡಿದರು. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಇಡಿಜಿಎಸ್ ತಂತ್ರಜ್ಞಾನ ಬಳಕೆ ಮಾಡಿ ಪ್ರತಿಯೊಂದು ಅಂಕಪಟ್ಟಿಗಳ ಮೇಲೆ 150 ಕ್ಕೂ ಹೆಚ್ಚು ಹಣ ಪಡೆಯಲಾಗುತ್ತಿದೆ. ಸರ್ಕಾರ ಈ ಕೂಡಲೇ ಇಡಿಜಿಎಸ್ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ರು.