ಜನಪ್ರತಿನಿಧಿಯ ಇಚ್ಛಾಶಕ್ತಿಗೆ ಸಾಕ್ಷಿ ಈ ಬ್ಯಾರೇಜ್ : ಬರಡಾಗಿದ್ದ ಭೂಮಿಯಲ್ಲಿ ಸಮೃದ್ಧ ಬೆಳೆ - Kannada news paper
🎬 Watch Now: Feature Video
ಕರೆಯ ನೀರನ್ನು ಕೆರಗೆ ಚೆಲ್ಲಿ, ಎಂಬಂತೆ ನದಿಯ ನೀರನ್ನು ನದಿಗೆ ತುಂಬಿ ಎಂದು ಜಮಖಂಡಿ ತಾಲೂಕಿನ ಕೃಷ್ಣಾ ತೀರದ ರೈತರು ಮಾಡಿದ್ದರು. 1988 ರಲ್ಲಿ ರೈತರಿಂದ ನಿರ್ಮಾಣವಾಗಿರುವ ಈ ಚಿಕ್ಕ ಪಡಸಲಗಿ ಬ್ಯಾರೇಜ್ ನಲ್ಲಿ ಸುಮಾರು 4 ಟಿಎಂಸಿ ಅಷ್ಟು ನೀರು ಸಂಗ್ರಹವಾಗುತ್ತೆ. ಸಿದ್ದು ನ್ಯಾಮಗೌಡ ನೇತೃತ್ವದಲ್ಲಿ ರೈತರು ಕಳೆದ ಎರಡು ವರ್ಷಗಳ ಹಿಂದೆ ರೈತರಿಂದಲೇ ಸಂಗ್ರಹಿಸಿದ್ದ ಸುಮಾರು ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ, ಬ್ಯಾರೇಜ್ ಗೆ ಯಂತ್ರವನ್ನು ಅಳವಡಿಸಿಕೊಂಡು ಸಂಗ್ರಹವಾಗುವ ಹಿನ್ನೀರನ್ನು ಮರಳಿ ನದಿ ತುಂಬಿಸುವುದಕ್ಕೆ ಚಾಲನೆ ನೀಡಿದ್ದರು. ಇಲ್ಲಿ ಸಂಗ್ರಹವಾಗುವ ನೀರು ಜಮಖಂಡಿ, ಅಥಣಿ ತಾಲೂಕಿನ 40 ಗ್ರಾಮಗಳಲ್ಲಿ ಕುಡಿಯಲು ಹಾಗೂ ಸುಮಾರು 60 ಸಾವಿರ ಎಕರೆ ಜಮೀನುಗಳಿಗೆ ನೀರಾವರಿಗೆ ಅನುಕೂಲವಾಗುತ್ತೆ.