ಬೆಳಗಾವಿ ಬಂಡಾಯಗಾರರಿಗೆ ನಿಯಂತ್ರಣ ಯತ್ನ: ರಮೇಶ್ ಜಾರಕಿಹೊಳಿ ಹೊರಗಿಟ್ಟು ಸಭೆ - KMF President Balachandra Zarakiiholi
🎬 Watch Now: Feature Video
ಬೆಳಗಾವಿ: ಸರ್ಕಾರ ಉಳಿಸುವ, ಉರುಳಿಸುವ ಖ್ಯಾತಿ ಬೆಳಗಾವಿ ರಾಜಕಾರಣದ್ದು. ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಜೋರಾಗಿದೆ. ಈ ಮಧ್ಯೆ ಕುಂದಾನಗರಿಯಲ್ಲೇ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಸಂಘಟನಾತ್ಮಕ ಸಭೆ ನಡೆಸಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗದ ಬಿಜೆಪಿ ಪ್ರಮುಖ ಪದಾಧಿಕಾರಿಗಳು, ಶಾಸಕರು ಭಾಗಿಯಾಗಿದ್ದರು.