ಬ್ಯಾಟ್ ಹಿಡಿದು ಫೀಲ್ಡಿಗಿಳಿದ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ!! - mayor cup 2020 organized in tumkur
🎬 Watch Now: Feature Video

ಕ್ರೀಡೆಯಲ್ಲಿ ಗೆದ್ದಾಗ ಮತ್ತು ಸೋತಾಗ ಅದನ್ನು ಸಮಾನವಾಗಿ ತೆಗೆದುಕೊಳ್ಳುವುದೇ ಕ್ರೀಡಾಸ್ಫೂರ್ತಿ ಎಂದು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು. ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಮೇಯರ್ಸ್ ಕಪ್ -2020' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದ್ರು. ಜೀವನದಲ್ಲಿ ಸುಖ-ದುಃಖ ಹೇಗೆ ಇರುತ್ತದೆಯೋ ಅದೇ ರೀತಿ ಕ್ರೀಡೆಯಲ್ಲಿಯೂ ಸೋಲು-ಗೆಲುವು ಇರುತ್ತದೆ. ಹಾಗಾಗಿ ಸೋತಾಗಲೂ ಗೆದ್ದಂತಹ ಮನಸ್ಥಿತಿಯನ್ನು ಹೊಂದಿದಾಗ ಮಾತ್ರ ಅವರು ಉತ್ತಮ ಕ್ರೀಡಾಪಟುವಾಗಲು ಸಾಧ್ಯ ಎಂದು ಹೇಳಿದ್ರು. ಇದೇ ವೇಳೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಕ್ರೀಡಾಪಟುಗಳನ್ನು ಉತ್ಸಾಹಿಸಲು ಕ್ರಿಕೆಟ್ ಆಡಲು ಟಾಸ್ ಹಾಕುವ ಜೊತೆಗೆ ಕೆಲಕಾಲ ಬ್ಯಾಟಿಂಗ್ ಕೂಡ ಮಾಡಿದರು.