ಸಂಗಣ್ಣ ಕರಡಿ ಗೆಲುವು... ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದ ಅಭಿಮಾನಿ - ಬಿಜೆಪಿ
🎬 Watch Now: Feature Video
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಗೆಲುವು ಸಾಧಿಸುತ್ತಿದ್ದಂತೆ ಅವರ ಅಭಿಮಾನಿಯೊಬ್ಬರು ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ. ಕರಡಿ ಸಂಗಣ್ಣ ಅವರ ಅಭಿಮಾನಿಯಾದ ಗವಿಸಿದ್ದಪ್ಪ ಭೋವಿ ಎಂಬುವರು ನಗರದ ಗಡಿಯಾರ ಕಂಬ ಸರ್ಕಲ್ ಬಳಿಯಿಂದ ಶ್ರೀ ಗವಿಸಿದ್ದೇಶ್ವರ ಮಠದವರೆಗೆ ಸುಡು ಬಿಸಿಲನ್ನು ಲೆಕ್ಕಿಸದೆ ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದರು. ಬಿಜೆಪಿ ಕಾರ್ಯಕರ್ತರು ಅವರಿಗೆ ಸಾಥ್ ನೀಡಿದರು. ಸಂಗಣ್ಣ ಅವರು ಗೆದ್ದರೆ ದೀರ್ಘದಂಡ ನಮಸ್ಕಾರ ಹಾಕುವುದಾಗಿ ಗವಿಸಿದ್ದಪ್ಪ ಬೇಡಿಕೊಂಡಿದ್ದರಂತೆ.