ಶ್ರೀರಾಂಪುರದಲ್ಲಿ ಸೀಲ್‌ಡೌನ್ ತೆರವು.. ಹೂ ಮಳೆಗೈದು ಕೊರೊನಾ ವಾರಿಯರ್ಸ್ಗೆ ಗೌರವ!! - ಶ್ರೀರಾಂಪುರ ಕೊರೊನಾ ಸುದ್ದಿ
🎬 Watch Now: Feature Video
ಮೈಸೂರು : ಕಳೆದ 28 ದಿನಗಳಿಂದ ವನವಾಸದಲ್ಲಿದ್ದ ಶ್ರೀರಾಂಪುರ ನಿವಾಸಿಗಳು ಇಂದು ಕೊಂಚ ನಿರಾಳರಾಗಿದ್ದರು. 28 ದಿನಗಳಿಂದ ಶ್ರೀರಾಂಪುರದಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ಕಂಡು ಬಾರದ ಹಿನ್ನೆಲೆಯಲ್ಲಿ ಸೀಲ್‌ಡೌನ್ ತೆರವುಗೊಳಿಸಲಾಯಿತು. ಇಲ್ಲಿನ ನಿವಾಸಿಗಳ ಆರೋಗ್ಯ ದೃಷ್ಟಿಯಿಂದ ಹಗಲಿರುಳು ದುಡಿದ ವೈದ್ಯರು,ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಸೇರಿ ಎಲ್ಲಾ ಕೊರೊನಾ ವಾರಿಯರ್ಸ್ಗೆ ಹೂ ಮಳೆಗೈದು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ ಪ್ರತಿಯೊಬ್ಬರ ಮನೆಯ ಮುಂದೆ ರಂಗೋಲಿ ಬಿಡಿಸಿ ಕೊರೊನಾ ವಾರಿಯರ್ಸ್ಗೆ ಗೌರವ ಸಲ್ಲಿಸಿದರು.