ಈ ಭಾಷೆ, ನೆಲ-ಜಲ ನಮ್ಮ ಉಸಿರು: ದಾವಣಗೆರೆಯಲ್ಲಿ ಪುಟ್ಟ ಬಾಲಕನ ಹೋರಾಟ - ಈ ಭಾಷೆ, ನೆಲ-ಜಲ ನಮ್ಮ ಉಸಿರು
🎬 Watch Now: Feature Video
ದಾವಣಗೆರೆ : ಕನ್ನಡಪರ ಸಂಘಟನೆಗಳು ಜಿಲ್ಲಾ ಬಂದ್ಗೆ ಕರೆ ನೀಡಿದ್ದು, ಪುಟ್ಟ ಬಾಲಕನೋರ್ವ ಸಾಥ್ ನೀಡಿದ್ದಾನೆ. ನಗರದ ಜಯದೇವ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಬಾಲಕ ಅವಿನಾಶ್ ಭಾಗಿಯಾಗಿದ್ದಾನೆ. ಈ ಭಾಷೆ, ನೆಲ, ಜಲ, ನಾಡು, ನುಡಿಗಾಗಿ, ಭ್ರಷ್ಟ ಹಾಗೂ ದುಷ್ಟರ ವಿರುದ್ಧ ನನ್ನ ಹೋರಾಟ ಎಂಬ ನಾಮಫಲಕವನ್ನು ಹಿಡಿದು ಪ್ರತಿಭಟನೆಗೆ ದನಿಗೂಡಿಸಿದ್ದಾನೆ. ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರಂತೆ ಬಾಲಕ ವೇಷಭೂಷಣ ಧರಿಸಿ ಗಮನ ಸೆಳೆಯುತ್ತಿದೆ.