ಶ್ರೀಧರ್ಮಸ್ಥಳ ದೇವಳದ ಗರ್ಭಗುಡಿ ಬಾಗಿಲಿಗೆ ನಮಿಸಿ ಹಿಂತಿರುಗಿದ ಸಿದ್ದರಾಮಯ್ಯ.. - ಧರ್ಮಸ್ಥಳ ದೇವಸ್ಥಾನ
🎬 Watch Now: Feature Video
ಮಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಧರ್ಮಸ್ಥಳ ದೇವಸ್ಥಾನದ ಒಳಗೆ ಹೋದಾಗ ದೇವಳದ ಗರ್ಭಗುಡಿ ಬಾಗಿಲು ಹಾಕಿದ್ದ ಕಾರಣ ಹೊರಗಿನಿಂದಲೇ ಕೈ ಮುಗಿದು ತೆರಳಿದ್ದಾರೆ. ಮಧ್ಯಾಹ್ನ ಪೂಜೆ ಬಳಿಕ ದೇವಾಲಯದ ಗರ್ಭಗುಡಿಗೆ ಬಾಗಿಲು ಹಾಕಿ ಸಂಜೆ 5 ಗಂಟೆಗೆ ಬಾಗಿಲು ತೆಗೆಯುವುದು ಕ್ರಮ. ಸಿದ್ದರಾಮಯ್ಯ ಅವರು ನಿಗದಿಯಂತೆ ಮಧ್ಯಾಹ್ನ ಒಂದು ಗಂಟೆಯ ಒಳಗೆ ದೇವಸ್ಥಾನಕ್ಕೆ ಬರಬೇಕಿತ್ತು. ಆದರೆ, ಬೆಳ್ತಂಗಡಿ ತಾಲೂಕಿನ ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ದೇವಸ್ಥಾನಕ್ಕೆ ಬರುವ ವೇಳೆ 3 ಗಂಟೆ ಆಗಿತ್ತು. ಅದಾಗಲೇ ದೇವಸ್ಥಾನದ ಗರ್ಭಗುಡಿಗೆ ಬಾಗಿಲು ಹಾಕಿತ್ತು. ಈ ಹಿನ್ನೆಲೆ ಅವರು ದೇವಸ್ಥಾನದ ಗರ್ಭಗುಡಿಯ ಬಾಗಿಲಿಗೆ ನಮಿಸಿ ತೆರಳಿದ್ದಾರೆ.