ನನ್ನ ದೇಶ, ನನ್ನ ನೆಲ ಎಂಬ ಅಭಿಮಾನ ಪ್ರತಿಯೊಬ್ಬರಲ್ಲಿರಬೇಕು: ಶ್ರೀಸುಭುದೇಂಧ್ರ ತೀರ್ಥರು - swamiji talk about anti national slogan,
🎬 Watch Now: Feature Video
ದೇಶದಲ್ಲಿ ವಾಸಿಸುವವರು ದೇಶ ಪ್ರೇಮವನ್ನ ಬೆಳೆಸಿಕೊಳ್ಳಬೇಕೆಂದು ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಕರೆ ನೀಡಿದ್ದಾರೆ. ಮಂತ್ರಾಲಯದಲ್ಲಿ ದೇಶ ವಿರೋಧಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ದೇಶ, ನನ್ನ ನೆಲ ಎಂಬ ಅಭಿಮಾನ ದೇಶದ ಪ್ರತಿಯೊಬ್ಬರಲ್ಲಿ ಇರಬೇಕು. ಜನ್ಮ ನೀಡಿದ ತಾಯಿ, ನಾವು ಮೆಟ್ಟಿದ ನೆಲ ನಮಗೆ ಸ್ವರ್ಗಕ್ಕಿಂತ ಮಿಗಿಲು ಎನ್ನುವುದನ್ನು ಅರಿತುಕೊಳ್ಳಬೇಕು. ನಮ್ಮದು ಇತರೆ ದೇಶಗಳಿಗಿಂತ ಮೊದಲೇ ಅಭಿವೃದ್ಧಿ ಹೊಂದಿರುವ ದೇಶ. ನಮ್ಮ ದೇಶದ ಸದೃಢತೆಗಾಗಿ ಎಲ್ಲರೂ ದೇಶ ಪ್ರೇಮ ಬೆಳೆಸಿಕೊಳ್ಳಬೇಕೆಂದು ಶ್ರೀಗಳು ಕರೆ ನೀಡಿದ್ದಾರೆ.