ಹಾವೇರಿಯಲ್ಲಿ ಶಿವಶರಣೆ ದಾನಮ್ಮ ದೇವಿ ಜಾತ್ರೆಗೆ ಸಿದ್ಧತೆ.. ಭಕ್ತರಿಗಾಗಿ 15ಸಾವಿರ ಹೋಳಿಗೆ ತಯಾರಿ - ದಾನಮ್ಮ ದೇವಿಗೆ ಹೋಳಿಗೆ ಅಂದರೆ ಅಚ್ಚುಮೆಚ್ಚು
🎬 Watch Now: Feature Video
ಹಾವೇರಿ: ಶಿವಶರಣೆ ದಾನಮ್ಮ ದೇವಿ ಜಾತ್ರಾ ಮಹೋತ್ಸವನ್ನ ಹಾವೇರಿಯಲ್ಲಿ ಆಚರಿಸಲಾಗುತ್ತಿದೆ. ಛಟ್ಟಿ ಅಮವಾಶ್ಯೆಯಂದು ದಾನಮ್ಮದೇವಿ ದೇವಸ್ಥಾನದಲ್ಲಿ ಶರಣೆ ದಾನಮ್ಮ ರಥೋತ್ಸವ ನಡೆಸಲಾಗುತ್ತೆ. ರಥೋತ್ಸವಕ್ಕೆ ಆಗಮಿಸುವ ಭಕ್ತರಿಗಾಗಿ ನಗರದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸುಮಾರು 15 ಸಾವಿರ ಹೋಳಿಗೆಗಳನ್ನು ಸಿದ್ದಪಡಿಸಲಾಗುತ್ತಿದೆ. ದಾನಮ್ಮ ದೇವಿಗೆ ಹೋಳಿಗೆ ಅಂದರೆ ಅಚ್ಚುಮೆಚ್ಚು. ಹಾಗಾಗಿ ರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಹೋಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಶೋಭಾ ಮಾಗಾವಿ ತಿಳಿಸಿದರು.