ಅನ್ನದಾತರಿಗಾಗಿ ರೈತ ದಸರಾ ಆಯೋಜಿಸಿದ ಶಿವಮೊಗ್ಗ ಪಾಲಿಕೆ - Raita dasara for Farmer
🎬 Watch Now: Feature Video
ಶಿವಮೊಗ್ಗ: ನಾಡಹಬ್ಬ ದಸರಾ ಪ್ರಯುಕ್ತ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ರೈತ ದಸರಾವನ್ನು ಆಯೋಜಿಸಲಾಗಿತ್ತು. ರೈತ ದಸರಾದಲ್ಲಿ ಅನ್ನದಾತರು ತಮ್ಮ ಎತ್ತಿನಗಾಡಿ, ಟ್ರಾಕ್ಟರ್, ಟಿಲ್ಲರ್ಗಳನ್ನು ಸಿಂಗರಿಸಿಕೊಂಡು ನಗರದ ಬಸ್ ನಿಲ್ದಾಣದಿಂದ ಹೊರಟು ಕುವೆಂಪು ರಂಗಮಂದಿರದವರೆಗೂ ಮೆರವಣಿಗೆ ಮೂಲಕ ಸಾಗಿ ಬಂದರು. ಬಳಿಕ ಕುವೆಂಪು ರಂಗ ಮಂದಿರದ ಆವರಣದಲ್ಲಿ ರೈತರಿಗಾಗಿ ಕೃಷಿ ಸ್ಟಾಲ್ಗಳನ್ನ ನಿರ್ಮಿಸಲಾಗಿತ್ತು. ಇಲ್ಲಿ ವಿವಿಧ ಭತ್ತದ ತಳಿಗಳು ಹಾಗೂ ಕೃಷಿ ಸಂಬಂಧಿಸಿದ ಯಂತ್ರೋಪಕರಣಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.