ರಾಜ್ಯದಲ್ಲಿ ಕೊರೊನಾ ಲಾಕ್ಡೌನ್: ಹಸಿದವರ ಹೊಟ್ಟೆ ತುಂಬಿಸಿದ ಶಿವಮೊಗ್ಗದ ಯುವಕ - ಕೊರೊನಾ ರೋಗ
🎬 Watch Now: Feature Video
ಲಾಕ್ಡೌನ್ ಹಿನ್ನೆಲೆ ಶಿವಮೊಗ್ಗದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಿವೆ. ಸುರಕ್ಷತೆಗಾಗಿ ಸರ್ಕಾರ ಮನೆ ಬಿಟ್ಟು ಹೊರಗೆ ಬರದಂತೆ ಜನರಿಗೆ ಆದೇಶ ಹೊರಡಿಸಿದೆ. ಅದ್ರೆ ಮನೆ ಇಲ್ಲದ ನಿರ್ಗತಿಕರ ಪರಿಸ್ಥಿತಿ ಮಾತ್ರ ಕರುಣಾಜನಕವಾಗಿದೆ. ಹೀಗಿರುವಾಗ ನಗರದ ಯುವಕ ವಿನೋದ್ ತಮ್ಮ ಮಾಲೀಕನ ಜೊತೆಗೂಡಿ ಸುಮಾರು 200 ಪುಳಿಯೊಗರೆ ಪ್ಯಾಕೇಟ್ ವಿತರಣೆ ಮಾಡುವ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡಿದ್ದಾರೆ.