thumbnail

By

Published : Dec 25, 2020, 11:17 AM IST

ETV Bharat / Videos

ಫ್ಲೈಓವರ್ ಮೇಲೆ ಸರಣಿ ಅಪಘಾತ.. ಸಿಲಿಕಾನ್​ ಸಿಟಿ ಜನರಿಗೆ ಬೆಳ್ಳಂಬೆಳಿಗ್ಗೆ ಟ್ರಾಫಿಕ್ ತಲೆಬಿಸಿ - ವಿಡಿಯೋ

ಬೆಂಗಳೂರು : ತುಮಕೂರು ರಸ್ತೆಯ ಫ್ಲೈ ಓವರ್ ಮೇಲೆ ಸರಣಿ ಅಪಘಾತವಾದ ಹಿನ್ನೆಲೆ ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿ ಜನರಿಗೆ ಟ್ರಾಫಿಕ್ ಬಿಸಿ ತಟ್ಟಿದೆ. ಪರಿಣಾಮ ಫ್ಲೈ ಓವರ್ ಮೇಲೆ ಕಿಲೋಮೀಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಗೊರಗುಂಟೆಪಾಳ್ಯ ಬಳಿಯ ಫ್ಲೈ‌ಓವರ್​ನಲ್ಲಿ ಟ್ರಾಫಿಕ್ ನಾಲ್ಕು ಕಾರುಗಳ ನಡುವೆ ಸಣ್ಣ ಪ್ರಮಾಣದ ಡಿಕ್ಕಿ ಸಂಭವಿಸಿದೆ. ಈ ಹಿನ್ನೆಲೆ‌ ಜಾಮ್‌ ಉಂಟಾಗಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸದ್ಯ ಪೀಣ್ಯಾ ಸಂಚಾರಿ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.