ಕೋವಿಡ್-19 ಆತಂಕದಿಂದ ಸ್ವಯಂ ಪ್ರೇರಿತ ದಿಗ್ಬಂಧನ ವಿಧಿಸಿಕೊಂಡ ಗ್ರಾಮಸ್ಥರು - ಕೊರೋನಾ ವೈರಸ್ ಹಿನ್ನೆಲೆ ಸ್ವಯಂ ಪ್ರೇರಿತ ದಿಗ್ಬಂಧನ
🎬 Watch Now: Feature Video
ಮೈಸೂರು: ಕೊರೊನಾ ವೈರಸ್ ಭೀತಿಯ ಹಿನ್ನೆಲೆ ಯಾರು ಬರದಂತೆ ಹಾಗೂ ಗ್ರಾಮದಿಂದ ಹೊರ ಹೋಗದಂತೆ ತಾಲೂಕಿನ ಸಾತಗಳ್ಳಿ ಗ್ರಾಮದ ಮುಖಂಡರು ಸ್ವಯಂ ಪ್ರೇರಿತ ದಿಗ್ಬಂಧನ ವಿಧಿಸಿಕೊಂಡಿದ್ದಾರೆ. ವಿದೇಶಗಳಿಂದ ಬಂದಿರುವ ಹಲವರಿಗೆ ಹೋಂ ಕ್ವಾರಂಟೈನ್ ವಿಧಿಸಿದ್ದರೂ ಈ ನಿಯಮವನ್ನು ಈಗಾಗಲೇ ಇಬ್ಬರು ಉಲ್ಲಂಘನೆ ಮಾಡಿ ಎಫ್ಐಆರ್ ದಾಖಲಾಗುವಂತೆ ಮಾಡಿಕೊಂಡಿದ್ದಾರೆ. ಆದರೆ ಸಾತಗಳ್ಳಿ ಗ್ರಾಮಸ್ಥರು ಸ್ವಯಂ ಪ್ರೇರಿತ ನಿರ್ಬಂಧ ಹಾಕಿಕೊಂಡು ಸಾಮಾಜಿಕ ಕಾಳಜಿ ಮೆರೆದಿದ್ದಾರೆ. ಇನ್ನು ಮೈಸೂರು ನಗರದಲ್ಲಿ ಅನಾವಶ್ಯಕವಾಗಿ ಓಡಾಡುವವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.