ಹೊಯ್ಸಳ ಶಾಲೆಯಲ್ಲಿ ಮನೆಮಾಡಿದ ಸಂಕ್ರಾಂತಿ ಸಂಭ್ರಮ - ಹಾಸನ ನಗರದ ಹೊಯ್ಸಳ ಶಾಲೆ ಸಂಕ್ರಾಂತಿ ಆಚರಣೆ
🎬 Watch Now: Feature Video
ಹಾಸನ ನಗರದ ಹೊಯ್ಸಳ ಶಾಲೆಯಲ್ಲಿ ಗ್ರಾಮೀಣ ಸೊಗಡಿನ ಸಂಕ್ರಾಂತಿಯನ್ನ ಆಚರಿಸೋ ಮೂಲಕ ವಿದ್ಯಾರ್ಥಿಗಳಿಗೆ ಹಳೇಯ ಸಂಪ್ರದಾಯವನ್ನ ಪರಿಚಯಿಸಲಾಯಿತು. ಸಂಕ್ರಾಂತಿ ಹಬ್ಬದ ಅಂಗವಾಗಿ ನಗರದ ತಣ್ಣಿರುಹಳ್ಳ ಸಮೀಪದ ಹೊಯ್ಸಳ ಶಾಲೆಯಲ್ಲಿ ಗುಡಿಸಲು ನಿರ್ಮಾಣ ಮಾಡಿ, ಅದರ ಒಳಗೆ ಸೌದೆ ಒಲೆಯಿಂದ ಪೊಂಗಲ್ ತಯಾರಿಸುವ ಮೂಲಕ ಮಕ್ಕಳಿಗೆ ಸುಗ್ಗಿ ಸಂಕ್ರಾಂತಿ ಹಬ್ಬದ ಬಗ್ಗೆ ತೋರ್ಪಡಿಸಲಾಯಿತು. ಪುಟ್ಟ ಪುಟ್ಟ ಮಕ್ಕಳ ನೃತ್ಯ ನೋಡುಗರ ಕಣ್ಮನ ಮನಸೆಳೆಯಿತು.
Last Updated : Jan 15, 2020, 10:51 PM IST